ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಪೋರ್ಕೋಡಿ ದುರ್ಗಾ ಸಂಘದ ಮಕ್ಕಳೀಗೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಸಹೋದಯ ಸಂಸ್ಥೆಯ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ ಹಾಗೂ ಶ್ರೀಮತಿ ನಿಮಿಶಾ ಮೊದಲಾದ ಉಪಸ್ಥಿತರಿದ್ದರು.ಮೊದಲನೆಯದಾಗಿ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ನಂತರ ಮಕ್ಕಳನ್ನು ಇಂಗ್ಲೀಷ್ ಅಲ್ಫಬೆಟ್ ಪ್ರಕಾರ ಗುಂಪುಗಳನ್ನಾಗಿ ಮಾಡಿ ಕೆಲವು ಚವಟಿಕೆಗಳನ್ನು ನಡೆಸಿ ನಂತರ ಮಕ್ಕಳಿಗೆ ಗುರುಹಿರಿಯರಿಗೆ ನಾವು ಹೇಗೆ ಗೌರವಿಸ ಬೇಕು ಹಾಗೂ ಸ್ವಚ್ಛಗೆಳತಿಯ ಬಗ್ಗೆ ಮಾಹಿತಿ ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು . ಶಿಕ್ಷಕ ವೃಂದದವರು ಧನ್ಯವಾದ ಸಮರ್ಪಿಸಿದರು. ಒಟ್ಟು 50 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.