ದಿನಾಂಕ 18.10.2019 ರಂದು ಸ.ಹಿ.ಪ್ರಾ ಶಾಲೆ ಕೆಂಜಾರು, ಮಂಗಳೂರು ಉತ್ತರ ವಲಯ ಪೂರ್ವಾಹ್ನ 10.00 ಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ವಿಜಯಲಕ್ಷ್ಮೀ ಇವರು ಸ್ವಾಗತಿಸಿದರು
ತದನಂತರ ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಇಲ್ಲಿನ ಸಂಯೋಜಕರಾದ ಭಗಿನಿ ಲೀನಾ ರವರು ವಿದ್ಯಾರ್ಥಿಗಳಿಗೆ ಹೆಣ್ಣು ಮಕ್ಕಳ ದಿನಾಚರಣೆ ಏಕೆ ಆಚರಿಸಲಾಗುತ್ತದೆ? ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ, ಕಳ್ಳಸಾಗಣಿಕೆ ನಮ್ಮ ದೇಶದಲ್ಲಿ ಲಿಂಗಾನುಪಾತ ವ್ಯತ್ಯಾಸ ಬಗ್ಗೆ ತಿಳಿಹೇಳಿದರು. ಗಂಡು ಮಕ್ಕಳು ಶಾಲೆ ಹಾಗೂ ತಮ್ಮ ಮನೆಯ ಹೆಣ್ಣು ಮಕ್ಕಳ ಬಗ್ಗೆ ಯಾವುದೇ ರೀತಿಯಲ್ಲಿ ತಾರತಮ್ಯ ತೋರದೆ ಸಮಾನತೆಯಿಂದ ನೋಡಿಕೊಳ್ಳಬೇಕೆಂದು ತಿಳಿಸಿದರು. ಹೆಣ್ಣು ಬರೀ ಹೂ ಹಾಗಿ ಇರದೆ ಕೆಲವೊಂದು ಕೆಟ್ಟ ಸಂದರ್ಭಗಳಲ್ಲಿ ತನ್ನನ್ನು ಮುಳ್ಳಗಿ ಪರಿವರ್ತಿಸಿ ತನ್ನ ರಕ್ಷಣೆ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭಗಿನಿ ಲೀನಾ, ಸಿಂಚನ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ನಳಿನಿ ಜಿ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀಮತಿ ಪುಪ್ಪ ಸದಸ್ಯರಾದ ಶ್ರೀಮತಿ ವತ್ಸಲ, ಮುಮ್ತಾಜ್, ಆಸಿನ ಶಾಲಾ ಸಹ ಶಿಕ್ಷಕಿ ಭಾಗ್ಯಮ್ಮ, ಜ್ಞಾನೇಶ್ವರಿ ಸಹೋದಯ ಸಂಸ್ಥೆಯ ಸಿಬ್ಬಂದಿಯಾದ ರಂಜಿನಿ ಮೊದಲಾದ ಉಪಸ್ಥಿತರಿದ್ದರು.