ಕೋವಿಡ್ 19 ಒಂದು ಸಾಂಕ್ರಾಮಿಕ ರೋಗವಾಗಿದ್ದು ಇದು ಮಾನವನಿಗೆ ದುರಂತವನ್ನು ತರುವಂತಾಹುದಾಗಿದೆ. ವಿಶೇಷವಾಗಿ ವಲಸಿಗರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಸಮಾಜಕ್ಕೆ ಒಂದು ದುರಂತವನ್ನು ಉಂಟುಮಾಡುವಂತದ್ದಾಗಿದ್ದು ಇಂತಹ ಸಮಯದಲ್ಲಿ ಬೆಥನಿ ಸಮಾಜ ಸೇವಾ ಪ್ರತಿಷ್ಠಾನ(ರಿ) ಮಂಗಳೂರು, ಸಹೋದಯ ಅದರ ಅಂಗಸಂಸ್ಥೆಯ ವತಿಯಿಂದ ಹಾಗೆಯೇ ಬೆಥನಿ ಸಂಸ್ಥೆಯ ಉದಾರವಾದ ಹಣಕಾಸಿನ ನೆರವಿನ ಮೂಲಕ ತುರ್ತು ನೆರವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸಹೋದಯ ಸಂಸ್ಥೆಯ ನಿರ್ದೆಶಕರಾದ ಭ| ಶಾಂತಿ ಪ್ರಿಯ, ಸಹೋದಯ ಸಂಸ್ಥೆಯ ಸಂಯೋಜಕರಾದ ಭ| ಲೀನಾ ಡಿಕೋಸ್ಟ ಮತ್ತು ಕಾರ್ಯಕರ್ತೆಯರು ಹಾಗೆಯೇ ಬೆಥನಿ ಸ್ಥಳೀಯ ಕಾನ್ವೆಂಟಿನ ಕನ್ಯ ಸ್ತ್ರೀಯರ ಸಹಾಯದಿಂದ ಮಳವೂರು ಗ್ರಾಮ ಪಂಚಾಯತ್ ಪೋರ್ಕೋಡಿ ಅಲ್ಲಿನ ಅಂಬೇಡ್ಕರ್ ನಗರ, ಸಿದ್ದಾರ್ಥ ನಗರ, ಕರಂಬಾರು, ನಾರಾಯಣ ಗುರು ನಗರ ಹಾಗೂ ಸಹೋದಯ ಸಂಸ್ಥೆ ಬೆಂದೂರು ಇಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸುಮಾರು 125 ವಲಸಿಗರ ಅರ್ಹ ಕುಟುಂಬಗಳು, ದೈನಂದಿನ ಕೂಲಿ ಕಾರ್ಮಿಕರು, ವಿಧವೆಯರು, ಪಡಿತರ ಚೀಟಿಗಳಿಂದ ವಂಚಿತರಾದವರನ್ನು ಗುರುತಿಸಿ 700-800 ರೂಪಾಯಿ ಮೌಲ್ಯದ ಆಹಾರ ಪೊಟ್ಟಣ ಗಳನ್ನು ವಿತರಿಸಲಾಯಿತು. ಬೆಥನಿ ಸಮಾಜ ಸೇವಾ ಪ್ರತಿಷ್ಠಾನ (ರಿ)ದ ಅಧ್ಯಕ್ಷರಾದ ಭ| ರೋಸ್ ಸೆಲಿನ್ ಮತ್ತು ಶ್ರೀ ನವಿನ್ ಡಿ ಸೋಜ ಸ್ಥಳಿಯ ನಗರ ಕಾರ್ಪೋರೇಟರ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭ| ಶಾಂತಿ ಪ್ರಿಯರವರು ಕೊರೋನ ರೋಗದ ಬಗ್ಗೆ ಜಾಗೃತಿಯನ್ನು ನೀಡಿ ಹೇಗೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು
ಹಾಗೇಯೆ ಡಾ| ಪ್ರವೀಣ್‍ರವರು ಹೋಮಿಯೊಪತಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ಉಚಿತವಾಗಿ ( Immune Booster) ವಿತರಿಸಿದರು.