ದಿನಾಂಕ 13/06/2020 ರಂದು ಬೆಥನಿ ಸಮಾಜ ಸೇವಾ ಪ್ರತಿಷ್ಠಾನ (ರಿ) ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು, ಮಂಗಳೂರು ಇಲ್ಲಿನ ಸಂಯೋಜಕರಾದ ಭ| ಲೀನಾರವರು ಕೋಡಿಕಲ್ ಪರಿಸರಕ್ಕೆ ಭೇಟಿ ನೀಡಿ ಮಹಾಮಾರಿ ಕೊರೋನ ಹಾಗೂ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಉಂಟುಮಾಡುವ ಮಾಹಿತಿಯನ್ನು ನೀಡಿ ಅಲ್ಲಿ ವಾಸವಾಗಿರುವ ವಲಸಿಗರು, ವಿಧವೆಯರು, ಕೂಲಿಕಾರ್ಮಿಕರು, ಪಡಿತರ ಚೀಟಿಯಿಂದ ವಂಚಿತರಾದ ಸುಮಾರು 25 ಮನೆಗಳಿಗೆ ಭೇಟಿ ಆಹಾರ ಪೊಟ್ಟಣವನ್ನು ವಿತರಿಸಿದರು.
ದಿನಾಂಕ 15/06/2020 ರಂದು ಸಹೋದಯ ಸಂಸ್ಥೆಯ ವಠಾರದಲ್ಲಿ ತುರ್ತು ನೆರವು ಕಾರ್ಯಕ್ರಮವನ್ನು ಏರ್ಪಡಿಸಿ ಈ ಕಾರ್ಯಕ್ರಮದಲ್ಲಿ ಸಹೋದಯ ಸಂಸ್ಥೆಯ ನಿರ್ದೇಶಕರಾದ ಭ| ಶಾಂತಿ ಪ್ರೀಯ ರವರು ಕೊವಿಡ್ 19ನ ಬಗ್ಗೆ ಜಾಗೃತಿ ಮಾಹಿತಿಯನ್ನು ನೀಡಿದರು ಹಾಗೂ ಸಹೋದಯ ಸಂಸ್ಥೆಯ ಸಂಯೋಜಕರಾದ ಭ| ಲೀನಾರವರು ಮನೆಯಲ್ಲೆ ಹೇಗೆ ಸ್ಯಾನಿಟೈಸರ್ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಸುಮಾರು 25 ಕುಟುಂಬಗಳಿಗೆ ಆಹಾರ ಪೊಟ್ಟಣವನ್ನು ವಿತರಿಸಲಾಯಿತು.