ದಿನಾಂಕ 22.06.2020 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಪೊರ್ಕೋಡಿ ಸಮುದಾಯ ಭವನದಲ್ಲಿ ಕೊರೋನಾ ಜಾಗೃತಿ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಸಹೋದಯ ಸಂಸ್ಥೆಯ ಸಂಯೋಜಕರಾದ ಭ|ಲೀನಾ ಡಿ ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕೊರೋನಾ ಜಾಗೃತಿಯ ಬಗ್ಗೆ ಮಾಹಿತಿಯನ್ನು ನೀಡಿ ಪಂಚ ಸೂತ್ರಗಳನ್ನು ಒಳಗೊಂಡ ಪ್ಯಾಪ್ಲೇಟ್ ಗಳನ್ನು ಹಾಗೂ ರೋಗನಿರೋಧಕ ಮಾತ್ರೆಗಳನ್ನು ನೀಡಲಾಯಿತು. ಹಾಗೂ 10 ಬಡ ಕುಟುಂಬಗಳಿಗೆ ಆಹಾರದ ಪೊಟ್ಟಣವನ್ನು ವಿತರಿಸಲಾಯಿತು. ತದನಂತರ ಹೋಲಿ ಫ್ಯಾಮಿಲಿ ಫ್ರೌಢ ಶಾಲೆ, ಬಜ್ಪೆ ಮತ್ತು ದಕ್ಷಿಣ ಕನ್ನಡ ಫ್ರೌಢ ಶಾಲೆ. ಕೆಂಜಾರು ಇಲ್ಲಿನ 10ನೇ ತರಗತಿಯ 120 ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಮಾಸ್ಕ್‍ಗಳನ್ನು ವಿತರಿಸಿದರು.