ದಿನಾಂಕ 29.06.2020 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಹಿಂದ್ ಕುಷ್ಠ್ ನಿವಾರಣ ಸಂಸ್ಥೆಯಲ್ಲಿ ಕೊರೋನಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಸಹೋದಯ ಬೆಥನಿ ಸೇವಾ ಕೇಂದ್ರದ ನಿರ್ದೇಶಕರಾದ ಭ|ಶಾಂತಿಪ್ರಿಯ ರವರು ಕೊರೋನಾ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಹಾಗೂ ರೋಗನಿರೋಧಕ ಶಕ್ತಿಯನ್ನುಂಟು ಮಾಡುವ ಔಷಧಿಯ ಬಗ್ಗೆ ಮಾಹಿತಿ ನೀಡಿದರು. ನಂತರ 17 ಬಡ ಕುಟುಂಬಗಳಿಗೆ ಆಹಾರದ ಪೊಟ್ಟಣ, ಸ್ಯಾನಿಟೈಸ್ಸರ್,ಮಸ್ಕ್, ಹೊದಿಕೆ,ಚಾಪೆ, ತಟ್ಟೆ, ಲೋಟ, ಚಮಚ ಮತ್ತು ರೋಗ ನಿರೋಧಕ ಮಾತ್ರೆಗಳನ್ನು ವಿತರಿಸಲಾಯಿತು. ಸಹೋದಯ ಸಂಸ್ಥೆಯ ಸಂಯೋಜಕರಾದ ಭ|ಲೀನಾ ಡಿ’ಕೋಸ್ಟ ,ಕಾರ್ಯಕರ್ತೆಯರಾದ, ಶ್ರೀಮತಿ ನಳಿನಿ, ಕು| ದೀಪಿಕಾ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.