ದಿನಾಂಕ 3.07.2020 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಪಣಂಬೂರು ಗ್ರಾಮ ಪಂಚಾಯತ್ ಅಂಗನವಾಡಿ ಕೇಂದ್ರ ಮೀನಾಕಳಿಯ ಪಣಂಬೂರು ಇಲ್ಲಿನ ಪರಿಸರದಲ್ಲಿ ವಾಸವಾಗಿರುವ ಮಣಿಪುರ, ಮಧ್ಯಪ್ರದೇಶ, ಒಡಿಶ, ಗುಜರಾತ್, ಜಾರ್ಖಂಡ್, ಬಿಜಾಪುರ, ಬಾದಾಮಿ, ಹಾಸನ, ಕೇರಳ, ತಮಿಳ್ನಾಡು ಮೊದಲಾದ ಸ್ಥಳಗಳಿಂದ ವಲಸೆ ಬಂದಿರುವ ಕಾರ್ಮಿಕರಿಗೆ ಕೊರೋನಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಸಹೋದಯ ಸಂಸ್ಥೆಯ ಸಂಯೋಜಕರಾದ ಭ| ಲೀನಾ ಡಿ’ಕೋಸ್ಟ, ಸ್ಥಳೀಯ ಕಾರ್ಪೋರೇಟರ್ ಕು|ಸುಮಿತ್ರ ಕರಿಯಾ, ಸಹೋದಯ ಸಂಸ್ಥೆಯ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ, ಕು|ದೀಪಿಕಾ, ಕು|ರಂಜಿನಿ , ಅಂಗನವಾಡಿ ಶಿಕ್ಷಕಿಯರು ಮೊದಲಾದವರು ಉಪಸ್ಥಿತರಿದ್ದರು. ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ತದನಂತರ ಭ| ಲೀನಾ ಡಿ’ಕೋಸ್ಟ ಹಾಗೂ ಕಾರ್ಯಕರ್ತೆಯಾದ ಶ್ರೀಮತಿ ನಳಿನಿಯವರು ಕೊರೋನಾ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಾಗೂ ರೋಗನಿರೋಧಕ ಔಷಧಿ ಹಾಗೂ ತಮ್ಮ ಸುತ್ತ ಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಡುವಂತೆ ಮಾಹಿತಿ ನೀಡಿದರು. ನಂತರ ಅಲ್ಲಿನ 97 ಬಡ ಕುಟುಂಬಗಳನ್ನು ಗುರುತಿಸಿ ಇವರು ಉದ್ಯೋಗವಿಲ್ಲದೆ ಕಷ್ಟ ಪಡುತ್ತಿದ್ದು ಇತ್ತೀಚಿಗಷ್ಟೆ ಕೆಲವರು ಉದ್ಯೋಗವನ್ನು ಹುಡುಕಿ ಹೊರಟ್ಟಿದುದ್ದರಿಂದ ಅವರ ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದನ್ನು ತಿಳಿದು ಇವರಿಗೆ ಆಹಾರದ ಪೊಟ್ಟಣ, ಮಾಸ್ಕ್, ಸ್ಯಾನಿಟೈಸ್ಸರ್, ಚಾಪೆ, ಹೊದಿಕೆ, ಬಕೆಟ್ ಮಗ್, ತಟ್ಟೆ-ಲೋಟೆ ಚಮಚ ಹಾಗೂ ರೋಗನಿರೋಧಕ ಔಷಧಿಯನ್ನು ವಿತರಿಸಲಾಯಿತು. ಹೇಮಾ (ಅಂಗನವಾಡಿ ಶಿಕ್ಷಕಿ) ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.