ದಿನಾಂಕ 14/08/2020 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ನವಜ್ಯೋತಿ ಯುವಕ ವೃಂದದ ಸಭಾಂಗಣದಲ್ಲಿ ಮೀನಾಕಳಿಯ ಮತ್ತು ಕುರಿಕಟ್ಟೆ ಪ್ರದೇಶದ ವಲಸೆ ಕಾರ್ಮಿಕರಿಗೆ ಹಾಗೂ ಬಡ ಕುಟುಂಬಗಳಿಗೆ ಕೋವಿಡ್-19 ಜಾಗೃತಿ ಮತ್ತು ಮಾಹಿತಿಯನ್ನು ನೀಡುವ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮವನ್ನು ದೇವರ ಸ್ಮರಣೆಯೊಂದಿಗೆ ಆರಂಭಿಸಲಾಯಿತು. ವೇದಿಕೆಯಲ್ಲಿ ನವಜ್ಯೋತಿ ಯುವಕ ವೃಂದದ ಗೌರವ ಅಧ್ಯಕ್ಷರಾದ ಶ್ರೀ ಲೀಲಾಧರ, ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ|ಲೀನಾ ಡಿ’ಕೋಸ್ಟ , ಕಾರ್ಯಕರ್ತೆಯರಾದ ಕು| ದೀಪಿಕಾ ಕು| ರಂಜಿನಿ ಮೊದಲಾದವರು ಉಪಸ್ಥಿತರಿದ್ದರು. ಭ| ಲೀನಾ ರವರು ಕೊವೀಡ್ -19 ರಿಂದ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಹಾಗೂ ಇದರಿಂದ ನಾವು ಹೇಗೆ ಎಚ್ಚರ ವಹಿಸಬೇಕು ಮತ್ತು ಆರು ವಿಧಾನಗಳ ಮೂಲಕ ತಮ್ಮ ಕೈಗಳನ್ನು ಹೇಗೆ ತೊಳೆದುಕೊಳ್ಳಬೇಕೆಂಬುದರ ಬಗ್ಗೆ ವಿವರಿಸಿದರು. ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮತ್ತು ರೋಗ ನಿರೋಧಕ ಔಷದಿಯ ಬಗ್ಗೆ ಹಾಗೂ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಚವಾಗಿಡುವಂತೆ ಮಾಹಿತಿ ನೀಡಿದರು. ನಂತರ ಅಲ್ಲಿನ 100 ವಲಸೆ ಕಾರ್ಮಿಕರಿಗೆ ಮತ್ತು ಬಡ ಕುಟುಂಬಗಳಿಗೆ ಚಾಪೆ, ತಟ್ಟೆ, ಲೋಟ, ಚಮಚ, ಹೊದಿಕೆ, ಬಕೆಟ್ ಮಗ್, ಟವಲ್ ಹಾಗೂ ರೋಗ ನಿರೋಧಕ ಔಷಧಿಯನ್ನು ನೀಡಿ ಅದರೊಂದಿಗೆ ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಸ್ಟ್ರೀಮರ್, ಥರ್ಮಸ್, ಕೆಟಲ್ ನ್ನು ವಿತರಿಸಲಾಯಿತು. ಕಾರ್ಯಕ್ರಮದ ನಿರೂಪಣೆ ಗಣೇಶ್, ಸ್ವಾಗತ ಹೇಮಾ (ಅಂಗನವಾಡಿ ಶಿಕ್ಷಕಿ) ಲೀಲಾಧರ ಇವರ ಧನ್ಯವಾದದೋಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.