ದಿನಾಂಕ 30/08/2020 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಕೂಳೂರು ಜ್ಯೋತಿ ನಗರದ ಜನರಿಗೆ ಕೋರೋನ ಜಾಗೃತಿ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಡಾಕ್ಟರ್ ಭಗಿನಿ ಜೂಲಿಯಟ್, ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ’ಕೋಸ್ಟ ಕಾರ್ಯಕರ್ತೆಯಾದ ಕುಮಾರಿ ದೀಪಿಕಾ ಜೀವನ್‍ಧಾರ ಸಂಸ್ಥೆಯ ಕಾರ್ಯಕರ್ತೆಯಾದ ಶ್ರೀಮತಿ ಭಾರತಿ ಮೊದಲಾದವರು ಉಪಸ್ಥಿತರಿದ್ದರು. ಡಾಕ್ಟರ್ ಭಗಿನಿ ಜೂಲಿಯಟ್ ನವರು ರೋಗ ನಿರೋಧಕ ಔಷಧಿಯ ಉಪಯೋಗವನ್ನು ತಿಳಿಸಿದರು. ಹಾಗೇಯೆ ಭ| ಲೀನಾ ಡಿ’ಕೋಸ್ಟರವರು ಕೋರೊನದ ಜಾಗೃತಿ ಮಾಹಿತಿಯನ್ನು ನೀಡಿ ಜ್ಯೋತಿ ನಗರದ 125 ಜನರಿಗೆ ಸ್ಯಾನಿಟೈಸರ್, ಮಾಸ್ಕ್, ಸೋಪ್, ರೋಗ ನೀರೋಧಕ ಔಷದಿ,ü 50 ಮಕ್ಕಳಿಗೆ ಇಮ್ಯೂನಿಸಮ್ ಸಿರಪ್ ನೀಡಿ ಅದರೊಂದಿಗೆ ಹಿರಿಯ ನಾಗರಿಕರಿಗೆ ಥರ್ಮಸ್‍ನ್ನು ವಿತರಿಸಲಾಯಿತು.