ದಿನಾಂಕ 10/09/2020 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಮೂಡುಶೆಡ್ಡೆಯ ಶಿವನಗರದ ಜನರಿಗೆ ಕೋರೋನ ಜಾಗೃತಿ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯಾದ ಕು| ದೀಪಿಕಾ ಜೀವನ್‍ಧಾರ ಸಂಸ್ಥೆಯ ಕಾರ್ಯಕರ್ತೆಯಾದ ಶ್ರೀಮತಿ ಭಾರತಿ ಮೂಡುಶೆಡ್ಡೆ ಕೇಂದ್ರದ ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ರತಿ ,ಪೂರ್ಣಿಮ ಮೊದಲಾದವರು ಉಪಸ್ಥಿತರಿದ್ದರು. ಕೋರೊನದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಹಾಗೂ ರೋಗ ನಿರೋಧಕ ಶಕ್ತಿಯನ್ನುಂಟು ಮಾಡುವ ಔóಧಿಯ ಬಗ್ಗೆ ಮಾಹಿತಿ ನೀಡಲಾಯಿತು. ನಂತರ 20 ಬಡ ಕುಟುಂಬಗಳಿಗೆ ಆಹಾರ ಪೊಟ್ಟಣ, ಸೋಪ್, ರೋಗ ನಿರೋಧಕ ಔಷಧಿಯನ್ನು ನೀಡಿ ಅದರೊಂದಿಗೆ ಹಿರಿಯ ನಾಗರಿಕರಿಗೆ ಥರ್ಮಸ್ , ಸ್ಟ್ರೀಮರ್ ಅನ್ನು ವಿತರಿಸಲಾಯಿತು.