The Nazareth Manifesto of Jesus and the missionary zeal of the Founder Servant of God RFC Mascarenhas became the guiding motivation for evangelization for the Bethany Sisters through their various ministries, very specially the Social and Medical Apostolates.
The Bethany Social Service Trust® (BSST) thus was registered in 1995 to give a comprehensive framework to the pro-poor activities of the Congregation of the Sisters of the Little Flower of Bethany, Mangalore. Late Sr Agnellathe then superior general was the founding President, Sr Jyoti the Secretary, Sr Medella the Treasurer, Sr Lillis, Sr Clerina and Sr Ann Teresa were the Founding Trustees. Sahodaya being its visible face, became a hub of multifarious activities in Dakshina Kannada and Udupi Districts working towards the emancipation and empowerment of women, girl children and the marginalised.
Since 2016, Sr Rose Celine, as its President, Sr Shanthi Priya as the Secretary, Sr Christine the Treasurer and Sr Lillis, Sr Mariette and Sr Lilitta the Member Trustees hold the baton of fervour and move forward to make the dreams of BSST come true towards building a humane, just and fraternal world.
Ever since its inception BSST has taken up very challenging issues that beset the contemporary society and relegates the most vulnerable ones pushing them further onto the margins of the society without any hopes for their dream of a peaceful living.
To mark this jubilee year BSST has launched a website- www.bsstmangalore.org , published a special news bulletin - ‘Sahodaya’ and has released a book – “Bethany in Frontier Mission”, edited by Sr Shanthi Priya, the general councilor and the Secretary of BSST. These channels will provide more information about the works of BSST.
The celebrations were held on December 19, 2020 beginning with a thanksgiving Eucharist officiated by Rev Fr Felix SJ and thereafter a short felicitation program at Sahodaya hall, Bendur. Sr Rose Celine the President of the Trust presided over the program, Sr Shanthi Priya, Secretary and Director of Sahodaya accorded a cordial welcome to all, Sr Leena Dcosta the Program Coordinator of Sahodaya presented the brief report of BSST and felicitated the past and present office bearers of the Trust. The Directors/Heads of various NGOs of Mangalore city participated in the celebration.
Reported by Sr Shanthi Priya, Secretary, BSST, Mangalore
ಬೆಥನಿ ಸಮಾಜ ಸೇವಾ ಪ್ರತಿಷ್ಠಾನ (ರಿ) ಮಂಗಳೂರು - ಬೆಳ್ಳಿ ಮಹೋತ್ಸವ
ಯೇಸುಸ್ವಾಮಿ ಈ ಭೂಮಿಯಲ್ಲಿ ಅವತರಿಸಿದ ಉದ್ದೇಶವನ್ನು ಮನಗೊಂಡ ಬೆಥನಿ ಸಂಸ್ಥೆಯ ಸ್ಥಾಪಕರಾದ ದೇವರ ಸೇವಕ ರೇಮಂಡ್ ಮಸ್ಕರೇನಸ್‍ರವರಿಗೆ ಯೇಸುವಿನ ಸುಸಂದೇಶ ಸಾರಲು ಬಲವಾದ ಮಿಶನರಿ ಆಕಾಂಕ್ಷೆ ಇತ್ತು. ಇದು ಬೆಥನಿ ಸಂಸ್ಥೆಯ ಭಗಿನಿಯರ ಎಲ್ಲಾ ಸತ್ಕಾರ್ಯಗಳಿಗೆ ಪ್ರೇರಣೆಯಾಯಿತು. ಈ ಕನಸನ್ನು ನನಾಸಾಗಿಸುವ ಉದ್ದೇಶದಿಂದ, ಬಡಜನರ ಸೇವೆಗಾಗಿ 1995 ರಲ್ಲಿ ಈ ಬೆಥನಿ ಸಮಾಜ ಸೇವಾ ಪ್ರತಿಷ್ಠಾನ (ರಿ) (ಬಿ.ಎಸ್.ಎಸ್.ಟಿ) ಸ್ಥಾಪಿಸಲಾಯಿತು.
ಆಗ ಮಹಾಮಾತೆಯಾಗಿದ್ದ ಭ| ಅಗ್ನೆಲ್ಲಾ ಸ್ಥಾಪಕ ಆಧ್ಯಕ್ಷರಾಗಿ, ಭ| ಜ್ಯೋತಿ ಕಾರ್ಯದರ್ಶಿಯಾಗಿ, ಭ| ಮೆಡೆಲ್ಲಾ ಖಜಾಂಚಿಯಾಗಿ, ಭ| ಲಿಲ್ಲಿಸ್, ಭ| ಕ್ಲೇರಿನಾ ಮತ್ತು ಭ| ಆ್ಯನ್ ತೆರೆಸಾ ಸ್ಥಾಪನಾ ಟ್ರಸ್ಟಿಗಳಾಗಿ ನೇಮಕಗೊಂಡು ಕಾರ್ಯ ನಿರ್ವಹಿಸಿದರು. ದಕ್ಶಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಪ್ರತಿಷ್ಠನವು ಹಲವಾರು ವಿಧದ ಸಮಾಜ ಸೇವೆಯ
ಕೆಲಸಕಾರ್ಯಗಳನ್ನು ಕೈಗೊಂಡು ಬೆಥನಿ ಭಗಿನಿಯರ ಮೂಲಕ, ಸ್ತ್ರೀಯರ, ಹೆಣ್ಮಕ್ಕಳ ಮತ್ತು ಸಮಾಜದಲ್ಲಿ ದುರ್ಬಲರ ಸಬಲೀಕರಣಕ್ಕಾಗಿ ಬಿ.ಎಸ್.ಎಸ್.ಟಿ.ಯು ಕಾರ್ಯ ನಿರ್ವಹಿಸುತ್ತಿದೆ.
2016 ರಲ್ಲಿ ಭ| ರೋಸ್ ಸೆಲಿನ್ ಅಧ್ಯಕ್ಷರಾಗಿ, ಭ| ಶಾಂತಿಪ್ರಿಯ ಕಾರ್ಯದರ್ಶಿಯಾಗಿ, ಭ| ಕ್ರಿಸ್ತಿನ್ ಖಜಾಂಚಿಯಾಗಿ ಹಾಗೂ ಭ| ಲಿಲ್ಲಿಸ್, ಭ| ಮಾರಿಯೇಟ್ ಮತ್ತು ಭ| ಲಿಲಿಟಾ ಟ್ರಸ್ಟಿಗಳಾಗಿ ಆಯ್ಕೆಯಾದವರೆಲ್ಲಾ ಈಗಲೂ ಮಾನವೀಯತೆಯ, ನೈತಿಕ, ನ್ಯಾಯಪರ ಮತ್ತು ಭೃತತ್ವದ ಸಮಾಜ ಕಟ್ಟುವ ಕನಸನ್ನು ನನಸು ಮಾಡುವ ಹುಮ್ಮನಸ್ಸಿನಿಂದ ಮುಂದೆ ಸಾಗುತ್ತಿದ್ದಾರೆ. ಬಿ.ಎಸ್.ಎಸ್.ಟಿ. ಸ್ಥಾಪನೆಯಾದಾಗಿನಿಂದ ಈವರೆಗೂ ಅಸಹಾಯಕರ ಸಮಸ್ಯೆಗಳ ಎಲ್ಲಾ ಪಂಥಾಹ್ವಾನಗಳನ್ನು
ಎದುರಿಸಿ, ಅವುಗಳಿಗೆ ಪರಿಹಾರ ನೀಡಿ , ಅವರನ್ನು ಸಬಲರನ್ನಾಗಿಸಿ, ನೆಮ್ಮದಿಯ ಬದುಕನ್ನು ನೀಡಲು ಶ್ರಮಿಸುತ್ತಿದೆ.
ಬಿ.ಎಸ್.ಎಸ್.ಟಿ.ಯು, ಬೆಳ್ಳಿಹಬ್ಬದ ಸ್ಮರಣಾರ್ಥವಾಗಿ www.bsstmangalore.org ಎಂಬ ವೆಬ್ ಸೈಟ್ ಅನಾವರಣಗೊಂಡಿತು. ಬೆಥನಿ ಸಮಾಜ ಸೇವಾ ಪ್ರತಿಷ್ಟಾನದ ಕಾರ್ಯದರ್ಶಿ ಭ| ಶಾಂತಿಪ್ರಿಯ ಸಂಪಾದಿಸಿದ “ಬೆಥನಿ ಇನ್ ಫ್ರಂಟಿಯರ್ ಮಿಶನ್ “ ಎಂಬ ಪುಸ್ತಕ ಡಿಸೆಂಬರ್ 3, 2020 ರಂದು ಬಿಡುಗಡೆಯಾಯಿತು ಹಾಗೂ “ಸಹೋದಯ ವಿಶೇಷ ವಾರ್ತಾ ಸಂಚಿಕೆ”ಯನ್ನು ಪ್ರಕಟಿಸಲಾಯಿತು. ಈ ಮೂರು ಮಾಧ್ಯಮಗಳು ಬಿ.ಎಸ್.ಎಸ್.ಟಿ. ಯ ಕಾರ್ಯ ಕಲಾಪಗಳ ಬಗ್ಗೆ ಮಾಹಿತಿ ಒದಗಿಸುತ್ತವೆ.
ಬೆಥನಿ ಸಮಾಜ ಸೇವಾ ಪ್ರತಿಷ್ಠಾನ(ರಿ)ದ ಬೆಳ್ಳಿ ಹಬ್ಬದ ಸಮಾರಂಭವು ಡಿ. 19,2020 ರಂದು ಯೇಸುಸಭೆಯ ವಂ. ಫೆಲಿಕ್ಸ್ ಎಸ್.ಜೆ. – ಇವರು ಅರ್ಪಿಸಿದ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು. ನಂತರ, ಸಹೋದಯದ ಸಭಾಂಗಣದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಟ್ರಸ್ಟ್‍ನ ಅಧ್ಯಕ್ಷೆ ಭ| ರೋಸ್ ಸೆಲಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾದರ್ಶಿಯಾಗಿರುವ ಭ| ಶಾಂತಿಪ್ರಿಯ ಎಲ್ಲರನ್ನು ಸ್ವಾಗತಿಸಿದರು. ಸಂಯೋಜಕರಾಗಿರುವ ಭ| ಲೀನಾ ಡಿಕೋಸ್ಟಾ ಸಹೋದಯದ ವರದಿಯನ್ನು ಮಂಡಿಸಿದರು. ನಂತರ ಪ್ರತಿಷ್ಟಾನದ ಮಾಜಿ ಮತ್ತು ಹಾಲಿ ಪದಾಧಿಕಾರಿಗಳನ್ನು ಮತ್ತು ಸೇವೆ ಸಲ್ಲಿಸಿದ ಸಹೋದಯದ ಸಂಯೋಜಕರನ್ನು ಸನ್ಮಾನಿಸಲಾಯಿತು. ಮಂಗಳೂರಿನ ವಿವಿಧ ಖಾಸಗಿ ಸಂಸ್ಥೆಗಳ ಮುಖ್ಯಸ್ಥರು ಮತ್ತು ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹ ಭೋಜನದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.
-ಭ| ಲೀನಾ ಡಿ’ಕೋಸ್ತ, ಸಂಯೋಜಕರು
ಸಹೋದಯ ಬೆಥನಿ ಸೇವಾ ಕೇಂದ್ರ,ಬೆಂದೂರು