ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಸಿದ್ದಾರ್ಥನಗರ ಅಂಗನವಾಡಿ ಕೇಂದ್ರ ಹಾಗೂ ಕಿನ್ನಿ ಪದವು ಅಂಗನವಾಡಿ ಕೇಂದ್ರದ ಜನರಿಗೆ ಕೋರೋನಾ ಜಾಗೃತಿ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ|ಲೀನಾ ಡಿ’ಕೋಸ್ತ ,ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ, ಕು|ಐರಲ್ ಅಂಗನವಾಡಿ ಶಿಕ್ಷಕರು ಹಾಗೂ ಅಶಾ ಕಾರ್ಯಕರ್ತೆಯಾದ ರೂಪಾ ಮೊದಲಾದವರು ಉಪಸ್ಥಿತರಿದ್ದರು. ಕೋರೋನಾ ರೋಗದ ಮುನ್ನೆಚರಿಕೆ ಕ್ರಮದ ಬಗ್ಗೆ ಹಾಗೂ ರೋಗನಿರೋಧಕ ಜೌಷಧಿಯ ಬಗ್ಗೆ ಮಾಹಿತಿ ನೀಡಲಾಯಿತು. ನಂತರ 8 ಬಡ ಕುಟುಂಬಗಳಿಗೆ ಹಾಗೂ ಒಂದು ವರ್ಷದೊಳಗಿನ ಮಕ್ಕಳಿಗೆ ಸೊಳ್ಳೆ ಪರದೆಯನ್ನು ವಿತರಿಸಲಾಯಿತು. ಅದೇ ರೀತಿ 26 ಕುಟುಂಬಗಳಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮದ್ದು, ವಿಟಮಿನ್ ಸಿ, ಪೋಟೀನ್ , ಕಾಫ್ಲೇಟ್, ಕಣ ಬೇವು, ಅರಶಿನ ಸಾಬೂನು, ಸೊಳ್ಳೆ ಪರದೆ ವಿತರಿಸಲಾಯಿತು. ಅಂಗನವಾಡಿ ಕೇಂದ್ರಕ್ಕೆ ಸ್ಯಾನಿಟೈಸ್ಸರ್ , ಹ್ಯಾಂಡ್ ವಾಶ್ ವಿತರಿಸಲಾಯಿತು. ಅದೇ ರೀತಿ ಅಂಗನವಾಡಿ ಶಿಕ್ಷಕಿ ಹಾಗೂ ಆಯರವರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಬಿಸಿನೀರಿನ ಕೆಟಲ್ ವಿತರಿಸಲಾಯಿತು.
ತದನಂತರ ಕಿನ್ನಿ ಪದವು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕೋರೋನಾ ಜಾಗೃತಿ ಕ್ರಮಗಳನ್ನು ಮಾಹಿತಿಯನ್ನು ನೀಡಲಾಯಿತು. ಹಾಗೂ 39 ಕುಡುಂಬಗಳಿಗೆ ಸೊಳ್ಳೆ ಪರದೆ, ಪೋಟೀನ್ , ಆಯುಷ್ ಕ್ವಾತ, ಸೋಪು, ಕಾಫ್ಲೇಟ್, ವಿತರಿಸಲಾಯಿತು. ಹಾಗೂ 60 ವರ್ಷ ಮೇಲ್ಪಟ್ಟಿರುವ ಒಬ್ಬರೇ ವಾಸವಾಗಿರುವ 3 ಕುಟುಂಬಗಳಿಗೆ ಪ್ಲಾಸ್ಕ್ ವಿತರಿಸಲಾಯಿತು. ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಆಯರವರಿಗೆ ಸ್ಟಿಮರ್ ಮತ್ತು ಕೆಟಲ್ ವಿತರಿಸಲಾಯಿತು.