ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಮರವೂರು ಪಂಚಾಯತ್‍ನ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕೊರೋನ ಜಾಗೃತ ಮಾಹಿತಿಯನ್ನು ನೀಡಲಾಯಿತು. 7 ಮಕ್ಕಳಿಗೆ ಹಾಗೂ 9 ಮಂದಿ ಗರ್ಭಿಣಿಯರಿಗೆ ಪ್ರೋಟಿನ್, ಸೋಪು, ಕೋಫ್‍ಲೆಟ್, ರೋಗನಿರೋಧಕ ಶಕ್ತಿಯನ್ನು ಹಿಚ್ಚಿಸುವ ಜೌಷಧಿಯನ್ನು ವಿತರಿಸಲಾಯಿತು. 60 ವರ್ಷ ಮೇಲ್ಪಟ್ಟ 12 ವಯಸ್ಕರಿಗೆ ಸೊಳ್ಳೆ ಪರದೆ, ಸೋಪ್ ,ಪ್ರೋಟಿನ್‍ಗಳನ್ನು ನೀಡಲಾಯಿತು. ಹಾಗೂ ಅಂಗನವಾಡಿ ಕೇಂದ್ರಕ್ಕೆ ಸ್ಯಾನಿಟೈಸ್ಸರ್ ಸ್ಯಾಂಡ್ ನ್ನು ವಿತರಿಸಲಾಯಿತು. ಒಟ್ಟು 28 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತದನಂತರ ಕರಂಬಾರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ 13 ಮಕ್ಕಳಿಗೆ , 5 ಗರ್ಭಿಣಿಯರಿಗೆ ,6 ಮಂದಿ ಬಾಣಂತಿಯರಿಗೆ ಹಾಗೂ 60 ವರ್ಷ ಮೇಲ್ಪಟ್ಟ ವಯಸ್ಕರಿಗೆ ಸೋಪು, ಪ್ರೋಟಿನ್,ಕಾಫ್‍ಲೆಟನ್ನು ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಟೀಮರ್ , ಸೋಪನ್ನು ವಿತರಿಸಲಾಯಿತು. ಒಟ್ಟು 52 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕರಂಬಾರಿನ ಕಾಮಜಲ್ ಅಂಗನವಾಡಿಗೆ ಭೇಟಿ ನೀಡಿ 26 ಮಕ್ಕಳಿಗೆ ಪ್ರೋಟಿನ್, ಕಾಫ್‍ಲೆಟ್, ಆಯುಷ್ ಕ್ವಾತ ವಿತರಿಸಲಾಯಿತು. ಹಾಗೂ ವಯಸ್ಕರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆ , ಸೋಪ್, ಪ್ರೋಟಿನ್ ವಿತರಿಸಲಾಯಿತು. ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಟೀಮರ್ ವಿತರಿಸಲಾಯಿತು.
ಮಳವೂರು ಪಂಚಾಯತಿನ ವ್ಯಾಪ್ತಿಯಲ್ಲಿರುವ ಜೆರಿನಗರದ ಅಂಗನವಾಡಿ ಕೇಂದ್ರಕ್ಕೆ ಕಿಟ್ ವಿತರಣೆ ಮಾಡಲಾಯಿತು. ಹಾಗೂ ಅಲ್ಲಿನ 12 ಮಂದಿ ಗರ್ಭಿಣಿಯರಿಗೆ ಮತ್ತು 25 ಮಂದಿ ಮಕ್ಕಳಿಗೆ ಸೊಳ್ಳೆ ಪರದೆ, ಕೋಫ್ಲೇಟ್,ಸೋಪು, ಪ್ರೋಟಿನ್ ವಿತರಿಸಲಾಯಿತು.ನಂತರ ಹಳೆಯ ಏರ್ ಪೋರ್ಟ್ ರಸ್ತೆಯಲ್ಲಿ ಗುಡಾವುಪದವು ಪರಿಸರಕ್ಕೆ ಭೇಟಿ ನೀಡಿ 13 ಬಡ ಕುಟುಂಬಗಳಿಗೆ ಆಹಾರದ ಪೊಟ್ಟಣ, ಬಕೆಟ್, ಹೊದಿಕೆ, ಚಾಪೆ, ಪ್ರೋಟಿನ್, ಕೋಫ್‍ಲೆಟ್ ಸಾಬೂನುನನ್ನು ವಿತರಿಸಲಾಯಿತು.