ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ತತ್ತಾಡಿ ಕಾನ ಹಾಗೂ ಬಾರಿಂಜ ಅಂಗನವಾಡಿ ಕೇಂದ್ರಗಳಲ್ಲಿ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ|ಲೀನಾ ಡಿ’ಕೋಸ್ತ, ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ,ಕು| ಐರಲ್ ಹಾಗೂ ಅಂಗನವಾಡಿ ಕೇಂದ್ರದ ಶಿಕ್ಷಕರು ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮವು ದೇವರ ಸ್ಮರಣೆಯೊಂದಿಗೆ ಆರಂಭಿಸಲಾಯಿತು. ನಂತರ ಭ| ಲೀನಾ ಇವರು ಕೊರೋನಾ ಜಾಗೃತ ಮಾಹಿತಿ ನೀಡಿ. 16 ಕುಟುಂಬಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೌಷಧಿ, ವಿಟಮಿನ್ ಸಿ, ಪೋಟಿನ್ , ಕಾಫ್ಲೇಟ್, ಕಣ ಬೇವು, ಅರಶಿನ ಸಾಬೂನು, ಸೊಳ್ಳೆ ಪರದೆ ವಿತರಿಸಲಾಯಿತು. ಹಾಗೂ 16 ವಯಸ್ಕರಿಗೆ , ಬಡ ಕುಟುಂಬಗಳಿಗೆ ಪ್ಲಾಸ್ಕ್ ಹಾಗೂ ಪ್ರೋಟಿನ್ , ಸೋಪ್, ವಿತರಿಸಲಾಯಿತು. ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ಲಾವ್ಸ್ ಹಾಗೂ ಕೆಟಲ್ ವಿತರಿಸಲಾಯಿತು.
ತದನಂತರ ಬಾರಿಂಜ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾಹಿತಿಯನ್ನು ನೀಡಿ 49 ಮಕ್ಕಳಿಗೆ ಪ್ರೋಟಿನ್, ಆಯುಷ್ ಕ್ವಾತ ನೀಡಲಾಯಿತು.23 ಕಿಶೋರಿಯರಿಗೆ ಡೆಟಲ್ ಹ್ಯಾಂಡ್ ವಾಶ್, ಪ್ರೋಟಿನ್ ವಿತರಿಸಲಾಯಿತು. ಹಾಗೂ 60 ವರ್ಷ ಮೇಲ್ಪಟ್ಟ 30 ಮಹಿಳೆಯರಿಗೆ ಸೊಳ್ಳೆ ಪರದೆ, ಹಾಗೂ 30 ಕುಟುಂಬಗಳಿಗೆ ಪ್ರೋಟಿನ್, ಸೋಪ್,ಸ್ಟೀಮರ್ ನೀಡಲಾಯಿತು. ಅಂಗನವಾಡಿ ಕೇಂದ್ರಕ್ಕೆ ಸ್ಯಾನಿಟೈಸ್ಸರ್ ಸ್ಟ್ಯಾಂಡ್ ಹಾಗೂ ಸ್ಯಾನಿಟೈಸ್ಸರ್ ನೀಡಲಾಯಿತು. ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಶಿಕ್ಷಕರಿಗೆ ಕೆಟಲ್,ಸೊಳ್ಳೆ ಪರದೆ, ಗ್ಲಾವ್ಸ್ ವಿತರಿಸಲಾಯಿತು.