ಸೌಜನ್ಯ
ಸಂಸ್ಥೆ: ಸಹೋದಯ
ಪ್ರಾಯ: 33 ವರ್ಷ
ಶೈಕ್ಷಣಿಕ ವಿವರ: ಹತ್ತನೇ ತರಗತಿ
ಸಂಘ : ಸ್ನೇಹ ಸ್ವ-ಸಹಾಯ ಸಂಘ ಮಾಡಮೆ
ವೈವಾಹಿಕ ವಿವರ:  ಇವರಿಗೆ ಇಬ್ಬರು ಗಂಡು ಮಕ್ಕಳು. ಇವರ ಗಂಡ ಶಾಲೆಯ ಎಟೆಂಡರ್ ಕೆಲಸ ಮಾಡುತ್ತಿದ್ದಾರೆ.
 

 

 

ಸೌಜನ್ಯರವರು ಸ್ನೇಹ ಸಂಘ ಸದಸ್ಯೆಯಾಗಿದ್ದು . ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕೃಷಿಯನ್ನು ಮಾಡುತ್ತಿದ್ದರು ತನ್ನ ಅವಶ್ಯಕತೆಗಳಿಗಾಗಿ ತನ್ನ ಸಂಘದಿಂದ ಆಂತರಿಕ ಸಾಲಗಳನ್ನು ತೆಗೆದುಕೊಂಡು ಮರುಪಾವತಿ ಮಾಡಿಕೊಂಡಿದ್ದಾರೆ.  

ಸೌಜನ್ಯರವರು ಸಂಚಿಯ ಬಗ್ಗೆ ಮಾಹಿತಿ ಪಡೆದು ಮೊದಲಬಾರಿಗೆ ಬಾಡಿಗೆ ಮನೆ ನೀಡಲು 50000/- ಸಾಲವನ್ನು ಪಡೆದುಕೊಂಡರು. ಅದರ ಲಾಭಾಂಶದಿಂದ ತಮ್ಮ ಹಿತ್ತಲಿನಲ್ಲಿ ಅಡಿಕೆಯ ಗಿಡಗಳನ್ನು ನೆಟ್ಟರು. ನಂತರ 2ನೇ ಬಾರಿಗೆ 50000/- ಸಾಲವನ್ನು  ಪಡೆದು. ಹೈನುಗಾರಿಕೆಯನ್ನು ಅಭಿವೃದ್ಧಿ ಪಡಿಸಿಕೊಂಡು.  ತಮ್ಮ ಜಾಗದಲ್ಲಿ ತರಕಾರಿ ಒಳ್ಳೆಮೆಣಸು ಹಾಗೂ . ವಿವಿಧ ಬಗೆಯ ಬಾಳೆಗಿಡ,  ತೆಂಗಿನ ಮರದ ತೋಟ, ಕೋಕೋವನ್ನು  ಬೆಳೆಸುತ್ತಿದ್ದಾರೆ. ಹೈನುಗರಿಕೆ ಇದ್ದದರಿಂದ ಅದರ ಹಟ್ಟಿಗೊಬ್ಬರವು ಕೃಷಿಗೆ ಉಪಯೋಗವಾಗುವುದೆಂದು ಸೌಜನ್ಯ ಹೇಳುತ್ತಾರೆ. ಅದರೊಂದಿಗೆ ಜೇನು ಕೃಷಿ, ಊರಿನ ಕೋಳಿ ಸಾಕಾಣೆಯು ಮಾಡಿ ಅದರಿಂದ ಉತ್ತಮ ಲಾಭಾಂಶ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ.

ಸೌಜನ್ಯರವರ ಅತ್ತೆ,ಗಂಡ ಹಾಗೂ ಮೈದುನರವರು ಇವರೊಂದಿಗೆ ಸಹಕರಿಸುತ್ತಾರೆ. ಹೆಚ್ಚಿನ ವಸ್ತುಗಳು ಮನೆಯಲ್ಲಿಯೇ ಬೆಳೆಯುವುದರಿಂದ ಜೀವನ ನಿರ್ವಹಣೆಗೆ ಸಹಾಯವಾಗಿದೆಯೆಂದು ಹೇಳುತ್ತಾರೆ.

ಸೌಜನ್ಯರವರು ವಲಯ ಸಭೆಗೆ ಹಾಗೂ ಒಕ್ಕೂಟ ಸಭೆಗಳಿಗೆ ತಪ್ಪದೆ ಹಾಜರಾಗುತ್ತರೆ. ಸಂಘಕ್ಕೆ ಸೇರಿದರಿಂದ ಜ್ಞಾನ ದೊರೆತಿದೆ, ಸಭೆಗಳಲ್ಲಿ ಬಗವಹಿಸುವ  ಅವಕಾಶ ದೊರೆತಿದೆ ಎನ್ನುತ್ತಾರೆ. ಅವರು ಲಾಭಾಂಶದ ಸ್ವಲ್ಪ ಭಾಗವನ್ನು ಪೋಸ್ಟ್ ಆಫೀಸಿನಲ್ಲಿ  ಉಳಿತಾಯ ಮಾಡುತ್ತಾರೆ, ಅಲ್ಲದೆ ಹತ್ತಿರದ ಜಾಗವನ್ನು ಖರೀದಿಸಬೇಕೆಂದು ಅಲೋಚನೆ ಇದೆಯೆಂದು ಹೇಳಿದ್ದಾರೆ. ಇವರ ಪ್ರಕಾರ ಸ್ವ ಉದ್ಯೋಗ (ಕೃಷಿ) ಒಳ್ಳೆಯದು. ಬೇರೆ ಬೇರೆ ಅಲೋಚನೆಯೊಂದಿಗೆ ಅನುಭವ ದೊರೆಯುತ್ತದೆ, ಸಮಯವು ಕಳೆದದ್ದೇ ಗೊತ್ತಾಗುವುದಿಲ್ಲವೆಂದು ಸೌಜನ್ಯರವರು ಹೇಳುತ್ತಾರೆ.

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by