ಭಾಗಮ್ಮ
ಸಂಸ್ಥೆ: ಸಹೋದಯ
ಪ್ರಾಯ: 32ವರ್ಷ
ಶೈಕ್ಷಣಿಕ ವಿವರ: ಏಳನೇ ತರಗತಿ
ಸಂಘ: ದೀಪ ಸ್ವ-ಸಹಾಯ ಸಂಘ ಲಿಂಗಪ್ಪಯ್ಯ ಕಾಡು
ವೈವಾಹಿಕ ವಿವರ: ಇವರಿಗೆ ಮೂರು ಮಕ್ಕಳು .ಒಂದು ಗಂಡು ಮತ್ತು ಎರಡು ಹೆಣ್ಣು. ಇವರ ಗಂಡ ಎಲ್.ಐ.ಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇವರು ದೀಪ ಸ್ವ-ಸಹಾಯ ಸಂಘದ ಸದಸ್ಯೆಯಾಗಿದ್ದು. ಇವರು ಮಹಿಳಾ ಪಾಲಿಟೆಕ್ನಿಕ್ ವತಿಯಿಂದ ಹೊಲಿಗೆ ಹಾಗೂ ಬ್ಯೂಟಿಷಿಯನ್ ತರಬೇತಿಯನ್ನು ಪಡೆದಿದ್ದಾರೆ. ಒಂದು ತಿಂಗಳ ಬ್ಯೂಟಿಷಿಯನ್ ತರಬೇತಿಯನ್ನು ಪಡೆದ ಇವರು ಇದನ್ನೇ ಮುದುವರಿಸಬೇಕೆಂದು ಕನಸನ್ನು ಇಟ್ಟುಕೊಂಡಿದ್ದರು. ಅದರಂತೆ ಬ್ಯೂಟಿಷಿಯನ್ ವೃತ್ತಿಯನ್ನೇ ಮುಂದುವರಿಸಿ ಅದನ್ನು ಅಭಿವೃದ್ಧಿಗೊಳಿಸಲು ಸಂಚಿಯಿಂದ 50000/- ಸಾಲವನ್ನು ಪಡೆದು, ಕಾರ್ನಾಡಿನಲ್ಲಿ ಒಂದು ಸಣ್ಣ ಪಾರ್ಲರನ್ನು ಪ್ರಾರಂಭಿಸಿದರು ಸ್ವಲ್ಪ ಮಟ್ಟಿನ ಅಭಿವೃದ್ಧಿಯನ್ನು ಪಡೆದು ವಿದ್ಯಾರ್ಥಿಗಳಿಗೆ ಕ್ಲಾಸ್ ಕೊಡಲಾರಂಭಿಸಿದರು. ನಂತರ ಇದನ್ನು ಇನ್ನು ಹೆಚ್ಚು ಅಭಿವೃದ್ಧಿಪಡಿಸಲು 2ನೇ ಬಾರಿಗೆ ಸಂಚಿಯಿಂದ 50000/- ಸಾಲವನ್ನು ಪಡೆದರು.
ತಮ್ಮ ಪಾರ್ಲರ್‍ನಲ್ಲಿ ಮತ್ತಷ್ಟು ಆಧುನಿಕರಣಗೊಳಿಸಿ ಅಲ್ಲಿ ಆರ್ಯುವೇದಿಕ್ ಪ್ರೊಡೆಕ್ಟ್ ಹಾಗೂ ಒನ್ ಗ್ರಾಂ ಗೋಲ್ಡ್‍ನ್ನು ಸಹ ಸೇಲ್ ಮಾಡುತ್ತಿದ್ದು ಇದರಿಂದಾಗಿ ಇವರಿಗೆ ಹೆಚ್ಚಿನ ಲಾಭವೂ ದೊರೆಯಲಾರಂಭಿಸಿತು.
ನನ್ನ ಈ ಸ್ವ- ಉದ್ಯಮದಿಂದ ವೈಯಕ್ತಿಕವಾಗಿ ತುಂಬಾ ಲಾಭವಾಗಿದೆ. ಅದಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೂ ಸಹಾಯಕವಾಗಿದೆ. ಮಕ್ಕಳ ಭರತನಾಟ್ಯ, ಟ್ಯೂಷನ್, ಶಾಲಾವಾಹನ ಮುಂತಾದ ಖರ್ಚನ್ನು ನಾನೇ ಸ್ವತಃ ನೋಡಿಕೊಳ್ಳುತ್ತೇನೆ ಹಾಗೂ ತಮ್ಮದೇ ಆದ ಸ್ವಂತ ಮನೆಯನ್ನು ಖರೀದಿಸಿದೆವೆಂದು ತಿಳಿಸಿದ್ದಾರೆ.
ಭಾಗ್ಯಮ್ಮನವರ ಪ್ರಕಾರ ಮಹಿಳೆಯರು ಯಾರಿಗೂ ಅವಲಂಬಿತರಾಗಿರಬಾರದು. ತನ್ನ ಕಾಲ ಮೇಲೆ ತಾನು ನಿಲ್ಲಬೇಕು. ಭಾಗ್ಯಮ್ಮನವರು ‘ರವರ್ ಗ್ರೀನ್ ಬ್ಯೂಟಿ ಪಾರ್ಲರ್’ ಎಂಬ ಹೆಸರಿನಿಂದ ಕಾರ್ನಾಡು ಪರಿಸರದಲ್ಲಿ ಗುರುತಿಸಿದ್ದಾರೆಂದು ಹೆಮ್ಮೆಯಿಂದ ಹೇಳುತ್ತಾರೆ.