ದಿನಾಂಕ 11.11.2023 ರಂದು ಯುನಿಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಪಡಿ ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ(ರಿ), ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ ದ.ಕ ಮತ್ತು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ, ಮಂಗಳೂರು ಇವರ ಸಹಯೋಗದಲ್ಲಿ ದ.ಕ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್-2023 ಕಾರ್ಯಕ್ರಮವನ್ನು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ಸಭಾಂಗಣದಲ್ಲಿ ಏರ್ಪಡಿಸಲಾಯಿತು. ಆಗಮಿಸಿದಂತಹ ಅತಿಧಿ ಗಣ್ಯರನ್ನು ಶ್ರೀಮತಿ ಉಷಾ ನಾಯಕ್ (ಶಿಕ್ಷಣ ಸಂಪನ್ಮೂಲ ಕೇಂದ್ರ, ಮಂಗಳೂರು ಘಟಕದ ಅಧ್ಯಕ್ಷೆ) ಇವರು ಸ್ವಾಗತಿಸಿದರು ತದನಂತರ ಮಕ್ಕಳ ನಾಡ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಶ್ರೀ ರೆನ್ನಿ ಡಿ ಸೋಜಾ (ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಡಿ,ಮಂಗಳೂರು ಇವರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ನುಡಿಯನ್ನಾಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ನಯನ ರೈ (ಅಧ್ಯಕ್ಷರು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ(ರಿ) ದ.ಕ ಜಿಲ್ಲೆ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟಕರು ಶ್ರೀ ಹುಸ್ಮಾನ್ ಇವರು ದೀಪಾವಳಿ ಹಬ್ಬದೊಂದಿಗೆ ಮಕ್ಕಳ ಹಬ್ಬವು ಆರಂಭವಾಗಿದೆ. ಕತ್ತಲೆಯಲ್ಲಿರುವ ಮಕ್ಕಳನ್ನು ಬೆಳಕಿನೆಡೆಗೆ ತರುವಂತೆ ಬೆಳಕಿನಲ್ಲಿರುವ ಮಕ್ಕಳನ್ನು ಇನ್ನಷ್ಷು ಬೆಳಕಿನೆಡೆಗೆ ತರುವಂತಹ ಪ್ರಯತ್ನ ನಮ್ಮದಾಗಬೇಕು ಅದೇ ರೀತಿ ಮಕ್ಕಳ ಹಕ್ಕುಗಳ ಸಂಸತ್ತಿನ ಮುಖಾಂತರ ಹಲವಾರು ಮಕ್ಕಳಿಗೆ ತಮ್ಮ ಹಕ್ಕುಗಳು ಸಿಗುವಂತಾಗಲೆಂದು ಶುಭ ಹಾರೈಸಿದರು. ನಂತರ ಸಹೋದಯ ಬೆಥನಿ ಸೇವಾ ಕೇಂದ್ರದ ಸಯೋಜಕರಾದ ಭ| ಲೀನಾ ಡಿ ಕೋಸ್ಟ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ನಿಮ್ಮ ಒಂದು ಆದರ್ಶ ಹಲವಾರು ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯಲ್ಲಿ ಮಕ್ಕಳ ಶೋಷಣೆ ನಡೆಯುತ್ತಿವೆ ಇದನ್ನೆಲ್ಲ ನಾವು ಕಣ್ಣರೇ ಕಾಣುತ್ತಿದ್ದೇವೆ. ಇಂದು ನೀವು ಸಾವಿರಾರು ಮಕ್ಕಳ ಪರವಾಗಿ ಇಲ್ಲಿ ಸೇರಿದ್ದೀರಿ ಆದ್ದರಿಂದ ಇನ್ನೋರ್ವ ಮಕ್ಕಳ ಬಗ್ಗೆ ಯೋಚಿಸಿ ಅವರಿಗೆ ಸಿಗಬೇಕಾಗಿರುವ ಹಕ್ಕುಗಳು ನಮ್ಮೀ ಮಕ್ಕಳ ಸಂಸತ್ತಿನ ಮುಖಾಂತರ ಸಿಗುವಂತಾಗಲಿ ಎಂದು ಹಾರೈಸಿದರು.ತದನಂತರ ಮಾಜಿ ಅಧ್ಯಕ್ಷೆ ಜಿಲ್ಲಾ ಪಂಚಾಯತ್ ದ.ಕ ಮಮತ ಗಟ್ಟಿ ಇವರು ಮಕ್ಕಳ ಸಮಸ್ಯೆಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುವುದರಲ್ಲಿ ಹಾಗೂ ಮಕ್ಕಳು ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾನು ಕೂಡ ನಿಮ್ಮೊಂದಿಗೆ ಕೈಜೋಡಿಸುತ್ತೇನೆಂದು ಭರವಸೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ 15 ಶಾಲೆಯ 75 ಮಕ್ಕಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ನಂದಾ ಪಾಯಿಸ್ ಸಂಚಾಲಕಿ, ಶ್ರೀ ಕುಮಾರ್ ಜಿಲ್ಲಾ ಮಕ್ಕಳ ರಕ್ಷಣ ಘಟಕದ ರಕ್ಷಣಾಧಿಕಾರಿ,ಶ್ರೀಮತಿ ಕಸ್ತೂರಿ ಬಾಲ ನ್ಯಾಯ ಸಮಿತಿಯ ಸದಸ್ಯೆ, ಶ್ರೀಮತಿ ಚಂದ್ರವತಿ ಪ್ರಜ್ಞಾ ಸಂಸ್ಥೆ ಮೊದಲಾದವರು ಭಾಗವಹಿಸಿದ್ದರು. ನಂತರ ಮಕ್ಕಳ ಹಕ್ಕುಗಳ ಕುರಿತು ಚರ್ಚೆಯನ್ನು ನಡೆಸಲಾಯಿತು. ಕಾರ್ಯಕ್ರಮದ ನಿರೂಪಣೆ ಶ್ರೀಮತಿ ರಾಜೇಶ್ವರಿ ಪುತ್ತೂರು( ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಕೋಶಾಧಿಕಾರಿ) ಶ್ರೀ ಯೋಗೇಶ್ ಪಡಿ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.