ದಿನಾಂಕ 27.01.2024 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು,ಮಂಗಳೂರು ಹಾಗೂ ಮಂಗಳೂರು ವಿಶ್ವ ವಿದ್ಯಾನಿಲಯ ಸಮಾಜ ಕಾರ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ ಮಂಗಳಗಂಗೋತ್ರಿ, ಕೊಣಾಜೆ ಇವರ ಆಶ್ರಯದಲ್ಲಿ ಸಂತ ಜೋಸೆಫ್ ಹಿ.ಪ್ರಾ.ಶಾಲೆ ಕಂಕನಾಡಿ ಇಲ್ಲಿನ ಮಕ್ಕಳಿಗೆ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕು| ಸೌಜನ್ಯ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿಮಕ್ಕಳ ಸ್ವ-ಸುರಕ್ಷತೆ ಬಗ್ಗೆ ಮಾಹಿತಿ ನೀಡುತ್ತಾ ಮಕ್ಕಳಿಗೆ ಆಗುತ್ತಿರುವ ತೊಂದರೆಗಳು ಹಾಗೂ ಈ ಕುರಿತು ಯಾರಲ್ಲಿ ಹೇಳಬೇಕು ಇದನ್ನು ಯಾವ ರೀತಿಯಲ್ಲಿ ತಡೆಯಬಹುದು ಎಂಬುದರ ಕುರಿತು ಹಾಗೂ ಮಕ್ಕಳ ಸ್ವ-ಸುರಕ್ಷತೆಯಲ್ಲಿ ತಂದೆ-ತಾಯಿ ಹೆಚ್ಚಿನ ಗಮನ ಹರಿಸಿ ಮಕ್ಕಳಿಗೆ ತಿಳಿಸಿ ಹೇಳಬೇಕೆಂಬುದನ್ನು ಸಣ್ಣ ವಿಡಿಯೋ ಚಿತ್ರಣದ ಮೂಲಕ ವಿವರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಭ| ವೀಣಾ, ಶಾಲಾ ಶಿಕ್ಷಕ ವೃಂದ, ಪ್ರಥಮ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.