ದಿನಾಂಕ 24.02.2024 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು , ಅರೈಝ್ ಫೌಂಡೇಶನ್ ಹಾಗೂ ಸ್ಕೂಲ್ ಆಫ್ ಸೋಶಿಯಕ್ ವರ್ಕ್ ರೋಶನಿ ನಿಲಯ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ರೋಶನಿ ನಿಲಯ ಮಂಗಳೂರು ಇಲ್ಲಿನ ಸಭಾಂಗಣದಲ್ಲಿ ”ಬದಲಾವಣೆಗಾಗಿ ಧ್ವನಿ: ಮಾನವ ಘನತೆಯನ್ನು ಮರು ಸ್ಥಾಪಿಸಲು ಏಕೀಕರಣ” ಎಂಬ ವಿಷಯವನ್ನು ಆಧರಿಸಿ ಕಾರ್ಯಗಾರವನ್ನು ಆಯೋಜಿಸಲಾಯಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಡಾ|| ಸರಿತಾ ಡಿ ಸೋಜಾ (ಎ ಎಚ್‍ಟಿಸಿ ಅಪರಾಧಶಾಸ್ತ್ರದ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಮತ್ತು ವಿಧಿವಿಜ್ಞಾನ- ಅಧ್ಯಕ್ಷೆ) ಇವರು ಆಯೋಜಿಸಲಾದ ಕಾರ್ಯಾಗಾರದ ಉದ್ದೇಶದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭ| ಲೀನಾ ಡಿ ಕೋಸ್ಟ ಬಿ.ಎಸ್ ( ಸಂಯೋಜಕರು,ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು,ಮಂಗಳೂರು) ಇವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.
ನಂತರ ಸಂಪನ್ಮೂಲ ವ್ಯಕ್ತಿ ಡಾ|| ಪಿ.ಎಂ ನಾಯರ್ , ಐಪಿಎಸ್ ( ನಿವೃತ್ತ), ಮಾಜಿ ಪೊಲೀಸ್ ಮಹಾ ನಿರ್ದೇಶಕರು, ಇವರು ಜೈಪುರ ಬ್ಯಾಂಗಲ್ ವ್ಯಾಪಾರ ಕೇಸು, ಸೈಬರ್ ಗ್ರೂಮಿಂಗ್,ಸೈಬರ್ ವಚನೆ, ಸ್ಟೆಗಾನೋಗ್ರಫಿ, ಪ್ರಲೋಭನೆ ಮುಂತಾದ ವ್ಯಕ್ತಿಗಳು ಎದುರಿಸುತ್ತಿರುವ ಆನ್‍ಲೈನ್ ಸಮಸ್ಯೆಗಳಂತಹ ಕಳ್ಳ ಸಾಗಾಣಿಕೆ ಪ್ರಕರಣಗಳ ಕುರಿತು ಮಾತನಾಡಿದರು ಅಂತಹ ಸಂದರ್ಭಗಳಲ್ಲಿ ವ್ಯಕ್ತಿಗಳು ಸಾಮಾನ್ಯವಾಗಿ ಏನು ಮಾಡಬೇಕು ಹಾಗೂ ಏನು ಮಾಡಬಹುದು ಎಂಬುದರ ಕುರಿತು ತಿಳಿಸಿದರು. ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳ ಸಾಗಾಣಿಕೆ ನಡುವಿನ ವ್ಯತ್ಯಾಸವನ್ನು ತಿಳಿಸುತ್ತಾ ಎಲ್ಲಾ ಕಳ್ಳಸಾಗಾಣಿಕೆಗಳು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳಲು ಕಾರಣವಾಗುವುದಿಲ್ಲ ಹಾಗೆಯೇ ಬಡತನ, ವಿಪತ್ತುಗಳು, ಹಕ್ಕುಗಳ ಪ್ರವೇಶದ ಕೊರತೆ, ಅನಕ್ಷರತೆ, ಸಮುದಾಯ ಮತ್ತು ಕುಟುಂಬದ ಆರೈಕೆಯ ನಿರ್ಲಕ್ಷ್ಯ ಮತ್ತು ಹಕ್ಕುಗಳ ಅಜ್ಞಾನದಂತಹ ಕಳ್ಳ ಸಾಗಾಣಿಕೆಯ ಕಾರಣಗಳನ್ನು ವಿವರಿಸಿದರು. ನವೀನ ತಾಂತ್ರಿಕ ಪರಿಹಾರಗಳನ್ನು ಬಳಸಿಕೊಂಡು ಕಳ್ಳ ಸಾಗಾಣಿಕೆಗೆ ಸಂಬಂಧಿಸಿದ ನಿಯಮಗಳು ಹಾಗೂ ಕಾನೂನು ಯಾವುವು ಮತ್ತು ಕಳ್ಳಸಾಗಾಣಿಕೆಯನ್ನು ತಡೆಗಟ್ಟಲು ಮತ್ತು ಶಿಕ್ಷಿಸಲು ಅವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಡಾ|| ಪೌಲ್ ಜಿ ಅಕ್ವಿನಾಸ್ ( ಮಂಗಳೂರು ವಿಶ್ವ ವಿದ್ಯಾನಿಲಯದ ಮಾನವ ಕಳ್ಳ ಸಾಗಾಣಿಕೆ ವಿರೋಧಿ ಸ್ನಾತಕೋತ್ತರ ವಿಭಾಗದ ಅಧ್ಯಕ್ಷರು, ಸಮಾಜ ಕಾರ್ಯವಿಭಾಗದ ಪ್ರಾಧ್ಯಾಪಕರು) ಗುರುರಾಜ್ (ಮಂಗಳೂರು ದಕ್ಷಿಣ ಪೊಲೀಸ್ ಠಾಣೆ , ಪಾಂಡೇಶ್ವರ, ಮಂಗಳೂರು), ಭ| ಶಾಂತಿ ಪ್ರಿಯ ಬಿ.ಎಸ್( ನಿದೇರ್ಶಕರು, ಸಹೋದಯ ಬೆಥನಿ ಸೇವಾ ಕೇಂದ್ರದ ಬೆಂದೂರು,ಮಂಗಳೂರು),ಡಾ|| ಜೆನಿಸ್ ಮೇರಿ( ಉಪಪ್ರಾಂಶುಪಾಲರು, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ, ಮಂಗಳೂರು),ಭ| ಮೀರಾ ಮ್ಯಾಥ್ಯೂ( ಅಧ್ಯಕ್ಷರು, ಅಮೃತ್‍ತಲಿತ ಕುಮ್ ಇಂಡಿಯಾ).ಡಾ|| ಜೆಸಿಂತಾ ಡಿ ಸೋಜಾ ( ಮಾಜಿ ಪ್ರಾಂಶುಪಾಲರು), ಪ್ರೊ.ಎವೆಲಿನ್ ಬೆನಿಸ್(ಸಮಾಜ ಸೇವಾ ಸಂಸ್ಥೆಯ ಕಾರ್ಯದರ್ಶಿ), ಶ್ರೀ ರೋಶನಿ ಡಿ ಸೋಜಾ ( ಸಹಾಯಕ. ಎ ಎಚ್ ಟಿ ಸಿ, ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ್ ) ಮೊದಲಾದವರು ಉಪಸ್ಥಿತರಿದ್ದರು. ಅಥಿರಾ ವಿ.ಜೆ ( ಪ್ರಾಧ್ಯಾಪಕರು- ಸ್ನಾತಕೋತ್ತರ ವಿಭಾಗ) ಕು| ಶ್ರೇಷ್ಠಾ ಮೆಂಡನ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರಾಧ್ಯಾಪಕರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.ದ.ಕ ಜಿಲ್ಲೆಯ 9 ಕಾಲೇಜಿನ ಒಟ್ಟು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು.