ದಿನಾಂಕ 26-03-2025 ರಂದು 5, 6, 7ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ 27-03-2025 ರಂದು 1,2,3,4ನೇ ತರಗತಿ ವಿದ್ಯಾರ್ಥಿಗಳಿಗೆ ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಕಾಟಿಪಳ್ಳದಲ್ಲಿ ಬೇಸಿಗೆ ಶಿಬಿರವನ್ನು ಬೆಥನಿ ಸಹೋದಯ ಸೇವಾ ಕೇಂದ್ರದ ವತಿಯಿಂದ ನಡೆಸಲಾಯಿತು. ಮೊದಲಿಗೆ ಮಕ್ಕಳು ದೇವರ ಪಾರ್ಥನೆಯೊಂದಿಗೆ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ರೀಟಾ ಡೆಸಾರವರು ಸಹೋದಯ ಸಂಸ್ಥೆಯ ಕಾರ್ಯಕರ್ತೆಯರಿಗೆ ಹಾಗೂ ಎಂ.ಎಸ್ ಡಬ್ಲ್ಯೂ ಸ್ನಾತಕೋತ್ತರ ವಿಭಾಗದ ವಿಧ್ಯಾರ್ಥಿಗಳಿಗೆ ಸ್ವಾಗತಿಸಿ, ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಮೊದಲಿಗೆ ವಿದ್ಯಾರ್ಥಿಗಳ ಕಿರು ಪರಿಚಯವನ್ನು ಮಾಡಿಕೊಳ್ಳಲಾಯಿತು. ಕಾರ್ಯಕರ್ತೆ ವಾಣಿಯವರು ಕೆಲವು ಅಭಿನಯ ಗೀತೆಗಳನ್ನು ಕಲಿಸಿದರು. ವಿವಿಧ ಆಟಗಳನ್ನು ಆಡಿಸಲಾಯಿತು. ಬಳಿಕ, ಕಾರ್ಯಕರ್ತೆ ರೆನ್ನಿಲ್ಲಾ ರೋಶಿನಿಯವರು ಮೌಲ್ಯಗಳ ಕುರಿತು ಮಾಹಿತಿ ನೀಡಿದರು. ನಂತರ 6 ಗುಂಪುಗಳನ್ನಾಗಿ ಮಾಡಿ , ಗುಂಪಿಗೊಂದು ಹೆಸರು ಸೂಚಿಸಿ, ಒಬ್ಬ ನಾಯಕ/ ನಾಯಕಿಯನ್ನು ನೇಮಕ ಮಾಡಲು ಹೇಳಲಾಯಿತು. ಗುಂಪಿಗೊಂದು ವಿಷಯದ ನೀಡಿ ಚಟುವಟಿಕೆ ಮಾಡಲಾಯಿತು. ಮುಖ್ಯ ಶಿಕ್ಷಕಿ ಶ್ರೀಮತಿ ರೀಟಾ ಡೆಸಾರವರು ಹಾಗೂ ಸಹ ಶಿಕ್ಷಕಿಯರು ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು. ಕಾರ್ಯಕರ್ತೆ ವಾಣಿಯವರು ಧನ್ಯವಾದಗಳನ್ನು ಅರ್ಪಿಸಿದರು. ಒಟ್ಟು 102 ವಿಧ್ಯಾರ್ಥಿಗಳು ಭಾಗವಹಿಸಿದ್ದರು.