ದಿನಾಂಕ 21-03-2025 ಹಾಗೂ 24-03-2025ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಬಜಪೆ ಇಲ್ಲಿನ 5,6,7ನೇ ಮತ್ತು 1,2,3,4 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಯಿತು. ದೇವರ ಪ್ರಾರ್ಥನೆಯೊಂದಿಗೆ ಬೇಸಿಗೆ ಶಿಬಿರವನ್ನು ಆರಂಭಿಸಲಾಯಿತು. ಮೊದಲಿಗೆ ಶಿಬಿರಾರ್ಥಿಗಳ ಪರಿಚಯವನ್ನು ಭಿನ್ನವಾಗಿ ಮಾಡಿಕೊಳ್ಳಲಾಯಿತು. ಹೆಸರು ತರಗತಿಯೊಂದಿಗೆ ಇಷ್ಟವಾದ ಹೂವಿನ ಹೆಸರು, ತಿಂಡಿಯ ಹೆಸರು ಹಾಗೂ ಹವ್ಯಾಸಗಳ ಮೂಲಕ ಪರಿಚಯ ಮಾಡಿಕೊಂಡರು. ಕಾರ್ಯಕರ್ತೆ ವಾಣಿಯವರು ಅಭಿನಯ ಗೀತೆಯನ್ನು ಕಲಿಸಿದರು. ಬಳಿಕ ಕಾರ್ಯಕರ್ತೆ ರೆನ್ನಿಲ್ಲ ರೋಶಿನಿಯವರು ಮೌಲ್ಯಗಳ ಕುರಿತು ಮಾಹಿತಿ ನೀಡಿದರು. ಬಳಿಕ ವಿದ್ಯಾರ್ಥಿಗಳನ್ನು 9 ಗುಂಪುಗಳನ್ನಾಗಿ ವಿಂಗಡಿಸಿ, ಪ್ರತಿ ಗುಂಪಿನಲ್ಲಿ ಒಬ್ಬ ನಾಯಕಿಯನ್ನು ಆರಿಸಿ,ಗುಂಪಿಗೊಂದು ಹೆಸರನ್ನಿಡಲು ಸೂಚಿಸಿ ವಿಷಯ ನೀಡಿ ಗುಂಪು ಚಟುವಟಿಕೆ ಮಾಡಲಾಯಿತು. ತದನಂತರ ಮಕ್ಕಳಿಗೆ ಆಟಗಳನ್ನಾಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಶಿಕ್ಷಕ ವೃಂದದ ಧನ್ಯವಾದಗಳೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಒಟ್ಟು 177 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.