ಬೆಥನಿ ಸಮಾಜ ಸೇವಾ ಪ್ರತಿಷ್ಟಾನ, ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು, ಸಂತ ಪ್ಯಾಟ್ರಿಕ್ ದೇವಾಲಯ ಸಿದ್ಧಕಟ್ಟೆ, ಮರಿಯ ಗೊರಟ್ಟಿ ಸ್ವ-ಸಹಾಯ ಸಂಘ ಸಿಧ್ದಕಟ್ಟೆ, ಸ್ನೇಹ ಸ್ವ ಸಹಾಯ ಸಂಘ , ಮಾಡಮೆ , ಪ್ರಗತಿ ಸ್ವ ಸಹಾಯ ಸಂಘ ಕಲ್ಕುರಿ,ಐಶ್ವರ್ಯ ಸ್ವ-ಸಹಾಯ ಸಂಘ ಕುದ್ಕೋಳಿ ಹಾಗೂ ಸ್ತ್ರೀ ಆಯೋಗ ಇವರ ಸಹಯೋಗದಲ್ಲಿ ದಿನಾಂಕ 23.03.2025 ರಂದು ವಿಶ್ವ ಮಹಿಳಾ ದಿನವನ್ನು ಆಚರಿಸಲಾಯಿತು. ಮೊದಲಿಗೆ ವಯಸ್ಸಿಗೆ ಅನುಗುಣವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಲವು ಆಟೋಟ ಸ್ಫರ್ದೆಗಳನ್ನು ಏರ್ಪಡಿಸಲಾಯಿತು. ಬಳಿಕ ವಾಳೆ ಹಂತದಲ್ಲಿ ಗಾಯನ ಸ್ವರ್ಧೆಯನ್ನು ಏರ್ಪಡಿಸಲಾಯಿತು. ಸ್ವಾಗತ ನೃತ್ಯದ ಮೂಲಕ ಅತಿಥಿ ಗಣ್ಯರನ್ನು ವೇದಿಕೆಗೆ ಬರಮಾಡಿ ಕೊಳ್ಳಲಾಯಿತು ನಂತರ ಕಾರ್ಯಕ್ರಮವನ್ನು ದೇವರ ಸ್ಮರಣೆಯ ಮೂಲಕ ಆರಂಭಿಸಲಾಯಿತು. ಶ್ರೀಮತಿ ಜೆನ್ನಿ ಇವರು ತಮ್ಮ ವಾಕ್ ಚಾತುರ್ಯದ ಮುಖಾಂತರ ಎಲ್ಲಾ ಅಥಿತಿ ಗಣ್ಯರನ್ನು ಸ್ವಾಗತಿಸಿದರು. ತದನಂತರ ದೀಪವನ್ನು ಬೆಳಗುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕಿ ಭ| ಲೀನಾ ಡಿ ಕೋಸ್ಟ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸೈಬರ್ ಅಪರಾಧ ಮತ್ತು ಅದರ ಸುರಕ್ಷತೆ ಕುರಿತು ಮಾಹಿತಿಯನ್ನು ನೀಡಿದರು. ಬಳಿಕ ಸಹೋದಯ ಸಂಸ್ಥೆಯ ನಿವೃತ್ತ ಕಾರ್ಯಕರ್ತೆಯಾದ ಶ್ರೀಮತಿ ನಳಿನಿ ಶೆಟ್ಟಿ ಇವರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ 8 ಮಹಿಳೆಯರಿಗೆ ವೇದಿಕೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಧರ್ಮ ಗುರುಗಳಾದ ರೇ| ಫಾ| ಡೇನಿಯಲ್ ಡಿ ಸೋಜಾ ಸಂತ ಪ್ಯಾಟ್ರಿಕ್ ದೇವಾಲಯ ಸಿದ್ಧಕಟ್ಟೆ ಕಾರ್ಯಕ್ರಮವನ್ನು ಉದ್ದೇಶಿಸಿ ಹಿತ ವಚನಗಳನ್ನಾಡಿ ಮಹಿಳಾ ದಿನಾಚರಣೆಯ ಶುಭಾಶಯವನ್ನು ಕೋರಿದರು. ಮಹಿಳಾ ದಿನದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳನ್ನು ಹಾಗೂ ಗಾಯನ ಸ್ಪರ್ಧೆಯನ್ನು ನಡೆಸಲಾಗಿತ್ತು ಇದರಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ಸಂಘದ ಸದಸ್ಯರು ಹಾಡು, ನೃತ್ಯದ ಮೂಲಕ ಮನೋರಂಜಿಸಿದರು. ಶ್ರೀಮತಿ ಲೀನಾ ಇವರು ಸಂಘಗಳ ವಾರ್ಷಿಕ ವರದಿಯನ್ನು ಮಂಡಿಸಿದರು, ಶ್ರೀಮತಿ ರೀಟಾ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.