ಬೆಥನಿ ಸಮಾಜ ಸೇವಾ ಪ್ರತಿಷ್ಠಾನ (ರಿ) ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು, ಮಂಗಳೂರು ಇವರ ವತಿಯಿಂದ ಸುಮಾರು 18 ಶಾಲೆಗಳಲ್ಲಿನ ಐದನೇ, ಆರನೇ ಮತ್ತು ಏಳನೇಯ ತರಗತಿಯ ವಿದ್ಯಾರ್ಥಿಗಳಿಗೆ 2019-2020ನೇ ಸಾಲಿನ ಕಲಿಕಾ ಸಾಮಥ್ರ್ಯ ಸ್ಪರ್ಧಾ ಪರೀಕ್ಷೆಯನ್ನು ಏರ್ಪಡಿಸಲಾಯಿತು. ಇಂದು ದಿನಾಂಕ 07.12.2019 ರಂದು ಏಕಕಾಲದಲ್ಲಿ ಮಂಗಳೂರು, ಪುತ್ತೂರು, ಚಿಕ್ಕಮಗಳೂರು,ಬೆಳಗಾವಿ, ಶಿವಮೊಗ್ಗ, ಗುಲ್ಬರ್ಗ, ಸಿರ್ಸಿ, ಡೋರ್ನಹಳ್ಳಿ ಮೊದಲಾದ ಶಾಲೆಗಳಲ್ಲಿ ಒಟ್ಟು 1,291 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.