ಸುಮಿತ್ರ
ಸಂಸ್ಥೆ: ಸಹೋದಯ
ಪ್ರಾಯ; 55ವರ್ಷ
ಶೈಕ್ಷಣಿಕ ವಿವರ: ಅವಿದ್ಯಾವಂತರು
ಸಂಘ: ದೀಪ ಸ್ವ-ಸಹಾಯ ಸಂಘ ಲಿಂಗಪ್ಪಯ್ಯಕಾಡು
ವೈವಾಹಿಕ ವಿವರ: ಇವರಿಗೆ ಒಬ್ಬಳು ಹೆಣ್ಣು ಮಗಳಿದ್ದಾರೆ. ಇವರ ಗಂಡ ಮನೆಯಲ್ಲಿದ್ದಾರೆ.
ಸುಮಿತ್ರರವರು ದೀಪ ಸ್ವ-ಸಹಾಯ ಸಂಘದ ಸದಸ್ಯೆಯಾಗಿದ್ದು ಇವರಿಗೆ ಅನೇಕ ತರಬೇತಿಗಳು ಸಂಘದಿಂದ ದೊರೆತಿದೆ. ಈ ಮೊದಲು ಸುಮಿತ್ರರವರು ಕಾಂಕ್ರೀಟ್ ಕೆಲಸ ಮಾಡುತ್ತಿದ್ದರು. ಕೆಲಸ ಚೆನ್ನಾಗಿ ಕಲಿತ ನಂತರ ತಾನು ಜಲ್ಲಿ ಮೆಷಿನ್ ನ್ನು ಖರೀದಿಸಿದರೆ ಹೇಗೆ ಎಂದು ಅಲೋಚಿಸಿದರು. ಅಂತೆಯೇ ಮೊದಲ ಬಾರಿಗೆ ಸಂಚಿಯಿಂದ 50000/- ಸಾಲವನ್ನು ಪಡೆದುಕೊಂಡು ಕೈಯಲ್ಲಿ ತಿರುಗಿಸುವ ಕಾಂಕ್ರೀಟ್ ಮೆಷಿನ್‍ನ್ನು ಖರೀದಿಸಿದರು. ಇದನ್ನು ಬಿಲ್ಡಿಂಗ್ ಕೆಲಸ ನಡೆಯುವಲ್ಲಿ ಕೊಂಡೊಯ್ಯುತ್ತದ್ದರು. ಇದರಿಂದಾಗಿ ಒಳ್ಳೆಯ ಲಾಭಗಳಿಸುತ್ತಿದ್ದರು.
ನಂತರ ಇನ್ನು ಹೆಚ್ಚು ಅಭಿವೃದ್ಧಿ ಪಡಿಸಲು 2ನೇ ಬಾರಿ ಸಾಲವನ್ನು ಪಡೆದುಕೊಂಡರು. ಇದರಿಂದಾಗಿ ಕಾಂಕ್ರೀಟ್ ಕೆಲಸಕ್ಕೆ ಬೇಕಾದ ಚಟ್ಟಿ,ಬಾಲ್ದಿ ಮೊದಲಾದವುಗಳನ್ನು ಖರೀದಿಸಿದರು. ಇದರಿಂದ ಬಂದಂತಹ ಲಾಭಾಂಶದಿಂದ ತನ್ನ ಉದ್ಯಮವನ್ನು ಇನ್ನು ಅಭಿವೃದ್ಧಿ ಕರೆಂಟಿನ ಕಾಂಕ್ರೀಟ್ ಮೆಷಿನ್ ನ್ನು ಖರೀದಿಸಿದರು. ಕಾಂಕ್ರೀಟ್ ಕೆಲಸ ಮಾಡುವಲ್ಲಿ ಈ ಮೆಷಿನ್ ನ್ನು ಬಾಡಿಗೆಗೆ ಕೊಡುತ್ತಿದ್ದರು. ಹಾಗೂ ಇದರಿಂದ ಬಂದ ಲಾಭಾಂಶದಿಂದ ಒಂದು ಮನೆಯನ್ನು ಕಟ್ಟಿದ್ದೇನೆ, ಹಾಗೂ ಮಗಳ ಮದುವೆಯನ್ನು ಮಾಡಿದ್ದೇನೆಂದು ಖುಷಿಯಿಂದ ಹೇಳುತ್ತಾರೆ.
ಸುಮಿತ್ರರವರು ತಮ್ಮ ಬಿಡುವಿನ ಸಮಯದಲ್ಲಿ ಕುದ್ರೋಳಿಯಲ್ಲಿ ಮನೆ ಕೆಲಸ ಮಾಡುತ್ತಾರೆ. ಅವರಿಂದ ಡ್ರೈವಿಂಗ್ ನ್ನು ಕಲಿತು ಈಗ ನಾನು ದ್ವಿಚಕ್ರ ವಾಹನದಲ್ಲಿ ಮಾರ್ಕೆಟಿನವರೆಗೆ ಚಾಲನೆ ಮಾಡುತ್ತೇನೆಂದು ಹೇಳುತ್ತಾರೆ. ಸಂಘಕ್ಕೆ ಸೇರಿದರಿಂದ ನನಗೆ ತುಂಬಾ ಪ್ರಯೋಜನವಾಗಿದೆ. ಒಕ್ಕೂಟದ ಸಭೆಗಳಲ್ಲೂ ಭಾಗವಹಿಸುತ್ತಿದ್ದೇನೆ. ಕಟ್ಟಡ ಕಾರ್ಮಿಕ ಇಲಾಖೆಯ ಸದಸ್ಯೆಯಾಗಿದ್ದೇನೆ, ವಿದ್ಯೆ ಇಲ್ಲದರಿಂದ ಮೊದಲು ಹಣ ಲೆಕ್ಕ ಮಾಡಲು ತಿಳಿದಿಲ್ಲ, ಈಗ ನನ್ನ ಕೈಕೆಳಗೆ ಸ್ವಲ್ಪ ಜನರನ್ನು ಇಟ್ಟು ದುಡಿಸಿ ಅವರಿಗೆ ಕೆಲಸ ಕೊಟ್ಟು ಹಣ ನೀಡುವಷ್ಟು ಮುಂದುವರಿದಿದ್ದೇನೆಂದು ಸುಮಿತ್ರರವರು ಹೇಳುತ್ತಾರೆ.
ಯಾವುದೇ ಕೆಲಸದಲ್ಲಿ ಶ್ರದ್ಧೆ ಇರಬೇಕು. ಬೆವರು ಸುರಿಸಿ ಕೆಲಸ ಮಾಡಬೇಕು, ಆ ಬೆವರಿನ ಹಿಂದೆ ಸುಖವಿರುವುದೆಂದು ಸುಮಿತ್ರರವರು ತಮ್ಮ ಬರವಸೆಯ ಮಾತುಗಳನ್ನು ಹೇಳುತ್ತಾರೆ. ಸುಮಿತ್ರರವರ ಅಭಿವೃದ್ಧಿಗೆ ಸಹಕರಿಸಿದ ಸಂಘ, ಸಂಸ್ಥೆ,ಒಕ್ಕೂಟ ಹಾಗೂ ಸಂಚಿಗೆ ಹೃದಯಾಂತರಾಳದ ಧನ್ಯವಾದವನ್ನು ಸಲ್ಲಿಸುತ್ತಿದ್ದಾರೆ.